Showing posts with label ಕೃಷ್ಣ. Show all posts
Showing posts with label ಕೃಷ್ಣ. Show all posts

Sunday, 5 July 2020

ರಾಧೆಯ ಪ್ರೇಮ ಪಾಠ

ರಾಧೆಯ ಪ್ರೇಮ ಪಾಠ.

ಗೋಲೋಕದಲ್ಲಿ ಕೃಷ್ಣ ಮತ್ತು ರಾಧಾ ಎದುರಾಗುತ್ತಾರೆ, ವಿಚಲಿತನಾಗಿ ಕೃಷ್ಣ ಮುಗುಳ್ಳಗೆ ಯಲ್ಲಿ ರಾಧಾ ಒಬ್ಬರನ್ನೊಬ್ಬರು ಮಾಡುತ್ತಾ.....

ರಾಧಾ: ಹೇಗಿದ್ದೀರಾ ದ್ವಾರಕಾಧೀಶ?

(ಕೃಷ್ಣ ವಿಚಲಿತನಾಗಿ ರಾಧಾ ಯಾವಾಗಲೂ ಕಾನ್ಹಾ ಅಂತಾನೆ ಕರೆಯುವವಳು, ಇವತ್ತು ಈ ಸಂಭೋದನೆ ಕೃಷ್ಣನಿಗೆ ಆಘಾತ ಮಾಡಿತು. ಸ್ವಲ್ಪ ಸುಧಾರಿಸಿಕೊಂಡು) 

ಕೃಷ್ಣ: ರಾಧೆ ನಾನು ಈಗಲೂ ನಿನ್ನ ಪ್ರೀತಿಯ ಕಾನ್ಹಾ.
ನನ್ನನ್ನು ಈ ರೀತಿ ಸಂಭೋದಿಸಿ ಆಘಾತಕ್ಕೆ ಗುರಿ ಮಾಡಬೇಡ, ಬಾ ಕುಳಿತುಕೊ (ಕೃಷ್ಣ ರಾಧಾ ಇಬ್ಬರು ಕೊಡ್ತಾರೆ) ಈ ಜೋಕಾಲಿಯಲ್ಲಿ. 

ಕೃಷ್ಣ : ರಾಧೆ ನಾನು ಬೃಂದಾವನದಿಂದ ದೂರವಾದ ಮೇಲೆ ನಿನಗೆ ನನ್ನ ನೆನಪು ಬರಲಿಲ್ಲವೇ, ನನಗೆ ಯಾವಾಗಲೂ ನಿನ್ನ  ಮುಖಚಹರೆ ನನ್ನ ಕಣ್ಣ ಮುಂದೆ ಬಂದಾಗಲೆಲ್ಲ ನನ್ನ ಕಣ್ಣು ತುಂಬಿ ಬರುತ್ತದೆ. ಹೃದಯ ಭಾರವಾಗುತ್ತದೆ. ನಿನಗೆ ಏನು ಅನಿಸಲಿಲ್ಲವೇ ರಾಧೆ.

ರಾಧಾ: ನನಗೆ ಯಾವತ್ತೂ ಆ ರೀತಿ ಆಗಿಲ್ಲ ಕಾನಾ ಯಾಕಂದ್ರೆ ನೀನು ನನ್ನ ಕಣ್ಣಲ್ಲಿ ಇದಿಯ ನಿನ್ನ ನೆನಪಿನಿಂದ ಕಣ್ಣೀರಿನ ಮೂಲಕ ಹರಿದು ಹೋಗುವುದಕ್ಕೆ ನನಗೆ ಇಷ್ಟ ಇಲ್ಲ ಕಾನ್ಹಾ ಅದಕ್ಕೆ ನಂಗೆ ನಿನ್ನ ನೆನಪಿನಿಂದ ಕಣ್ಣುಗಳು ತುಂಬಲಿಲ್ಲ ಹೃದಯವು ಭಾರವಾಗಲಿಲ್ಲ.

ಕಾನ್ಹಾ ನೀನು ಪ್ರೇಮದಿಂದ ದೂರವಾದ ಮೇಲೆ ಏನು ಕಳಕೊಂಡೆ ನೀನು ನನ್ನ ಮರೆತೇ ಇವೆಲ್ಲದರ ಮೇಲೆ ನನ್ನ ಒಂದಿಷ್ಟು ಪ್ರಶ್ನೆಗಳಿವೆ | ಉತ್ತರಿಸುವೆಯಾ ?

(ಕೃಷ್ಣ ಮೂಕವಿಸ್ಮಿತನಾಗಿ ತಲೆ ಅಲ್ಲಡಸ್ತಾನೆ.)